ಆಕೃತಿ ಪುಸ್ತಕ
ಸಹಯೋಗದೊಂದಿಗೆ
ಟೊಟೊ ಫಂಡ್ಸ್ ದಿ ಆರ್ಟ್ಸ್
ಪ್ರಸ್ತುತಪಡಿಸುತ್ತಿರುವ
'ಕವನ ಮತ್ತು ಕವಿ ನಡುವೆ'
ಕವಿತೆಗಳ ಓದು ಹಾಗು ಚರ್ಚೆಗೆ ಎಲ್ಲರಿಗೂ ಕರೆಯೋಲೆ
ಕಳೆದ 15 ವರ್ಷಗಳ 'ಟೊಟೊ ಪುರಸ್ಕಾರ'ದ ಮೈಲಿಗಲ್ಲನ್ನು ಗುರುತಿಸುತ್ತ, 'ಟೊಟೊ ಫಂಡ್ಸ್ ದಿ ಆರ್ಟ್ಸ್' ನಡೆದು ಬಂದ ಹಾದಿಯನ್ನು ಪುನರಾವಲೋಕಿಸಲೆಂದು ಶುರು ಮಾಡುತ್ತಿರುವ 'ಸಿಂಹಾವಲೋಕನ ಸರಣಿ' ಯಲ್ಲಿ ಹಿಂದಿನ ಸ್ಪರ್ಧಾವಿಜೇತರು ಮತ್ತು ಕಡೆಯ ಹಂತ ತಲುಪಿದ ಯುವಪ್ರತಿಭೆಗಳನ್ನು ಒಟ್ಟಿಗೆ ಸೇರಿಸುವ ಉದ್ದೇಶದಿಂದ ಸರಣಿ ಕಾರ್ಯಕ್ರಮಗಳನ್ನು ಈ'ಕಾವ್ಯ ಸಂಜೆ'ಯ ಮೂಲಕ ಆರಂಭಿಸುತ್ತಿದ್ದೇವೆ.
ಈ ಸರಣಿಯ ಮೊದಲ ಕಾರ್ಯಕ್ರಮದಲ್ಲಿ ಕವಿಗಳಾದ ಮೌಲ್ಯ ಎಂ., ರಾಜೇಂದ್ರ ಪ್ರಸಾದ್ ಹಾಗು ಹೇಮಾ ನಾಯಕ್ ಅವರು ತಮ್ಮ ಕವಿತೆಗೆ ರೂಪಗೊಟ್ಟ ಪ್ರಭಾವಗಳು ಮತ್ತು ಆಸಕ್ತಿಯ ವಸ್ತು-ವಿಷಯಗಳ ಕುರಿತಂತೆ, ತಮ್ಮ ಸಾಹಿತ್ಯಕ ಪಯಣವನ್ನು ಆಯ್ದ ಕೆಲವು ಕವನಗಳ ಮೂಲಕ ನಮ್ಮ ಜೊತೆ ಹಂಚಿಕೊಳ್ಳುವರು. ಈ ಕಾರ್ಯಕ್ರಮದ ನಿರ್ವಹಣೆಯನ್ನು ಸ್ವತಃ ಕವಿಯತ್ರಿ ಮತ್ತು ಉಪನ್ಯಾಸಕಿ ಆಗಿರುವ ಡಾ. ಕಾವ್ಯಶ್ರೀ ಎಚ್ ಅವರು ವಹಿಸುವರು.
ಸಮಯ ಮತ್ತು ದಿನಾಂಕ : ಶನಿವಾರ ಜೂನ್ ೩೦, ೨೦೧೮, ಸಂಜೆ ೬:೦೦ ಕ್ಕೆ
ಸ್ಥಳ: ಆಕೃತಿ ಪುಸ್ತಕ, ನಂ. ೩೧/೧, ೧೨ನೇ ಮುಖ್ಯ ರಸ್ತೆ, ೩ನೇ ಬ್ಲಾಕ್, ರಾಜಾಜಿನಗರ
(ದಾರಿ ನಕ್ಷೆ ನೋಡಿ)
ಕವಿಗಳ ಪರಿಚಯ:
ಮೌಲ್ಯ ಎಂ. ಗುಲಬರ್ಗ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ
ಪದವಿ ಪಡೆದಿದ್ದಾರೆ. ನಂತರ ಮೈಸೂರು ವಿಶ್ವವಿದ್ಯಾನಿಲಯದ ಚಾಮರಾಜನಗರದ
ಸ್ನಾತಕೋತ್ತರ ಕೇಂದ್ರದಲ್ಲಿ ಕೆಲಕಾಲ ಅತಿಥಿ ಪ್ರಾಧ್ಯಾಪಕಿಯಾಗಿ ಸೇವೆ
ಸಲ್ಲಿಸಿದ್ದಾರೆ. ತಮ್ಮ ಬರವಣಿಗೆಗೆ ಹಲವಾರು ಪ್ರಶಸ್ತಿಗಳನು ಗೆಲ್ಲುವುದಲ್ಲದೇ, ಇವರ ಬರಹಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಫೋಟೋಗ್ರಫಿಯಂದರೆ ಇವರಿಗೆ ಖುಷಿ ಹಾಗು ಮೈಸೂರಿನ ರಂಗಾಯಣದಲ್ಲಿ ಹವ್ಯಾಸಿ ರಂಗಕಲಾವಿದೆಯಾಗಿ ಹತ್ತು ವರ್ಷಗಳ ಒಡನಾಟ ಇದೆ.
ಮೌಲ್ಯ, 2015 ನಲ್ಲಿ 'ಟೊಟೊ ಕನ್ನಡ ಸೃಜನಶೀಲ ಸಾಹಿತ್ಯ ಪುರಸ್ಕಾರ'ದ ವಿಜೇತರಾಗಿದ್ದರು.
ರಾಜೇಂದ್ರ ಪ್ರಸಾದ್ ಮೈಸೂರು
ವಿಶ್ವವಿದ್ಯಾನಿಲಯದಲ್ಲಿ ಎಂ ಕಾಂ ವ್ಯಾಸಂಗ ಮುಗಿಸಿ ಮಂಡ್ಯ ನಗರದಲ್ಲಿ ಅವರದೇ ಸ್ವಂತ ಉದ್ಯಮ
ಹೊಂದಿದ್ದಾರೆ. ಇವರ ಆಸಕ್ತಿಗಳು ಹಲವು: ಸಾಹಿತ್ಯದ ಓದು-ಬರಹ (ವಿಶೇಷವಾಗಿ ಕಾವ್ಯ), ಕರ್ನಾಟಕ ಸಂಗೀತ, ಇತಿಹಾಸ, ಬೌದ್ಧಮತ ಅಧ್ಯಯನ, ಝೆನ್ ಪೇಟಿಂಗ್, ತತ್ವ ಮತ್ತು ಪಾಕ ಶಾಸ್ತ್ರ. 2006 ರಂದೀಚೆಗೆ 5 ಕವಿತೆ ಸಂಗ್ರಹಗಳು ಪ್ರಕಟವಾಗಿವೆ.
ಹಲವು ಬಹುಮಾನ/ ಪುರಸ್ಕಾರ ಪಡೆದಿವೆ. ಪ್ರಸ್ತುತ 'ಸಂಕಥನ' ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿದ್ದಾರೆ.
ರಾಜೇಂದ್ರ, 2016 ರಲ್ಲಿ 'ಟೊಟೊ ಕನ್ನಡ ಸೃಜನಶೀಲ ಸಾಹಿತ್ಯ ಪುರಸ್ಕಾರ'ದ ವಿಜೇತರಾಗಿದ್ದರು.
ಹೇಮಾ ನಾಯಕ್ ಉತ್ತರ ಕನ್ನಡದ
ಅಂಕೋಲಾದ ನಿವಾಸಿಯಾಗಿದ್ದು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ
ಭೌತಶಾಸ್ತ್ರದಲ್ಲಿ ಎಂ. ಎಸ್ಸಿ. ಪದವಿ ಪಡೆದಿದ್ದಾರೆ. 2018 ಸಾಲಿನ ಟೊಟೊ
ಕನ್ನಡ ಸೃಜನಶೀಲ ಸಾಹಿತ್ಯ ಪುರಸ್ಕಾರ ಸ್ಪರ್ಧೆಯ ಕಡೆಯ ಹಂತ ತಲುಪಿದ ಮೂರು ಬರಹಗಾರರಲ್ಲಿ ಹೇಮಾ ಒಬ್ಬರಾಗಿದ್ದರು.
ಕಳೆದ ಜನವರಿಯಲ್ಲಿ ನಡೆದ ಟೊಟೊ ಪುರಸ್ಕಾರ ಸಮಾರಂಭದಲ್ಲಿ ಮೊದಲ ಬಾರಿಗೆ ತಮ್ಮ ಕವಿತೆಯನ್ನು ಓದಿ
ಪ್ರಸ್ತುತ ಪಡಿಸಿದ್ದು, ಈ ಕಾವ್ಯಸಂಜೆ ಎರಡನೆ ಸಂದರ್ಭವಾಗಿರುತ್ತದೆ.
ನಿರ್ವಾಹಕರು:
ಡಾ.ಕಾವ್ಯಶ್ರೀ
ಎಚ್ ಅವರು ವೃತ್ತಿಯಿಂದ ಕನ್ನಡ ಉಪನ್ಯಾಸಕಿ. ಇವರು
ಮಹಿಳಾ ಸಾಹಿತ್ಯ, ಸ್ತ್ರೀವಾದಿ ವಿಮರ್ಶೆ, ಅನುವಾದ ಮತ್ತು ಕಾವ್ಯಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಇಟ್ಟುಕೊಂಡಿದ್ದಾರೆ. 'ಕನ್ನಡದ ನಾಟಕಕಾರ್ತಿಯರು : ಸಾಹಿತ್ಯಕ ಮತ್ತು ಸಾಂಸ್ಕೃತಿಕ ಶೋಧ' ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ
ನೀಡಿದೆ. ಕರ್ನಾಟಕ ಲೇಖಕಿಯರ ಸಂಘವು ಉದಯೋನ್ಮುಖ ಕವಯತ್ರಿಯರಿಗೆ ನೀಡುವ 'ಗುಡಿಬಂಡೆ ಪೂರ್ಣಿಮ ದತ್ತಿನಿಧಿ ಬಹುಮಾನ' ಪಡೆದಿರುತ್ತಾರೆ.
ಕಾವ್ಯ ಮತ್ತು ನಾಟಕ ರಚನೆಯಲ್ಲಿ ಆಸಕ್ತರಾಗಿದ್ದು ಮಕ್ಕಳ ನಾಟಕಗಳನ್ನು ರಚಿಸಿ ಸ್ವತಃ
ನಿರ್ದೇಶಿಸಿದ್ದಾರೆ.
No comments:
Post a Comment