Sunday, June 17, 2018

An Evening of Kannada Poetry

Toto Funds the Arts 
Aakruti Books

are pleased to invite you to

​​
Kavana Mattu Kavi NaDuve

​​An Evening of Kannada Poetry This evening of Kannada Poetry is the first event of the Retrospective series, which marks the 15th year of the TOTO Awards, and brings together previous TOTO awards winners and shortlisted artists. 

The poets Moulya M, Rajendra Prasad and Hema Nayak come together to read a selection of their poems that traces their journey and formative influences, and explores the themes that have made them the poets that they are.

The evening will be moderated by the novelist and poet Dr Kavyashree H.   

Date and Time: Saturday June 30, 2018 at 6:00 pm
Venue: Aakruti Books, No.31/1, 12th Main, 3rd Block, Rajajinagar (see map)


About the Poets:

Moulya M has a postgraduate degree in English Literature from Gulbarga University. She has been a guest lecturer in English Literature at the University of Mysore. When she isn't winning awards for her poetry, she is getting published by popular print and online publications. Moulya  has a keen interest in photography and has worked with Rangayana, Mysore as an actor for over a decade. Moulya won the TOTO for Creative Writing in Kannada in 2015.

Rajendra Prasad, or RP as he is popularly known, is a young businessman based in Mandya. His interests are many and various:  they range from the reading and writing of literature, especially poetry, carnatic music and history to Buddhism and Zen paintings. He is intensely passionate about philosophy and cooking. Since 2006, he has won several awards for his poetry and has many poetry collections to his credit. He is currently the editor of the literary magazine Sankathana. Rajendra won the TOTO for Creative Writing in Kannada in 2016.

Hema Nayak, born in Uttara Kannada's Ankola, holds a Master's degree in Physics from Mysore University. Hema was shortlisted for the 2018 TOTO Award for Creative Writing in Kannada. The first time she read her poems in public was at the TOTO Awards ceremony last January. This will be her second public reading. 

About the Moderator:

Novelist  Kavyashree H. is keenly interested in women's literature, feminist criticism, translations and poetry. She received her doctorate on 'Women Playwrights in Kannada: a literary and cultural investigation' from Kannada University, Hampi. She has written and directed several plays for children and has been a recipient of the 'Gudibande Poornima Dattanidhi' award for emerging women poets in Karnataka.


Kavana Mattu Kavi NaDuve

ಆಕೃತಿ ಪುಸ್ತಕ
ಸಹಯೋಗದೊಂದಿಗೆ
ಟೊಟೊ ಫಂಡ್ಸ್ ದಿ ಆರ್ಟ್ಸ್
ಪ್ರಸ್ತುತಪಡಿಸುತ್ತಿರುವ
ಕವನ ಮತ್ತು ಕವಿ ನಡುವೆ
ಎಂಬ ಕವನಗಳ ಓದು ಹಾಗು ಚರ್ಚೆಗೆ ಎಲ್ಲರಿಗೂ ಕರೆಯೋಲೆ


ಕಳೆದ 15 ವರ್ಷಗಳ ಟೊಟೊ ಪುರಸ್ಕಾರದ ಮೈಲಿಗಲ್ಲನ್ನು ಗುರುತಿಸುತ್ತ, ಟೊಟೊ ಫಂಡ್ಸ್ ದಿ ಆರ್ಟ್ಸ್ ನಡೆದು ಬಂದ ಹಾದಿಯನ್ನು ಪುನರಾವಲೋಕಿಸಲೆಂದು ಶುರು ಮಾಡುತ್ತಿರುವ ಸಿಂಹಾವಲೋಕನ ಸರಣಿ ಯಲ್ಲಿ ಹಿಂದಿನ ವಿಜೇತರು ಹಾಗು ಕಿರುಪಟ್ಟಿಗೆ ತಲುಪಿದ ಯುವ ಪ್ರತಿಭೆಗಳನ್ನು ಒಟ್ಟಿಗೆ ಸೇರಿಸುವ ಉದ್ದೇಶದಿಂದ ಈ ಸರಣಿಯನ್ನು ನಮ್ಮ ಮೊದಲ ಕಾರ್ಯಕ್ರಮವಾದ ಈ ಕಾವ್ಯ ಸಂಜೆಯ ಮೂಲಕ ಆರಂಭಿಸುತ್ತಿದ್ದೇವೆ.
ನಮ್ಮ ಮೊದಲ ಕಾರ್ಯಕ್ರಮದಲ್ಲಿ ಕವಿಗಳಾದ ಮೌಲ್ಯ ಎಮ್ ರಾಜೇಂದ್ರ ಪ್ರಸಾದ್ ಹಾಗು ಹೇಮಾ ನಾಯಕ್ ತಮ್ಮ ಕವಿತೆಗೆ ರೂಪಗೊಟ್ಟ ಪ್ರಭಾವಗಳು ಮತ್ತು ತಮ್ಮ ಆಸ್ಥೆಯ ವಸ್ತು ವಿಷಯಗಳ ಮೇಲೆ ಬೆಳಕು ಬೀರಿತಮ್ಮ ಸಾಹಿತ್ಯಕ ಪಯಣವನ್ನು ಆಯ್ದ ಕೆಲುವು ಕವನಗಳ ಮೂಲಕ ನಮ್ಮ ಜೊತೆ ಹಂಚಿಕೊಳ್ಳುವರು. ಈ ಕಾರ್ಯಕ್ರಮದ ನಿರ್ವಾಹಣೆಯ ಜವಾಬ್ದಾರಿಯನ್ನು ಸ್ವತಃ ಕವಿಯತ್ರಿ ಹಾಗು ಉಪನ್ಯಾಸಕಿ ಆಗಿರುವ ಡಾ. ಕಾವ್ಯಶ್ರೀ ಎಚ್ ಅವರು ಹೊತ್ತಿದ್ದಾರೆ.
ಸಮಯ ಮತ್ತು ದಿನಾಂಕ : ಶನಿವಾರ ಜೂನ್ ೩೦೨೦೧೮ಸಂಜೆ ೬:೦೦ ಕ್ಕೆ
ಸ್ಥಳ: ಆಕೃತಿ ಪುಸ್ತಕನಂ. ೩೧/೧೧೨ನೇ  ಮುಖ್ಯ ರಸ್ತೆ೩ನೇ ಬ್ಲಾಕ್ರಾಜಾಜಿನಗರ 
(ದಾರಿ ನಕ್ಷೆ ನೋಡಿ)
ಕವಿಗಳ ಪರಿಚಯ:  
ಮೌಲ್ಯ ಎಮ್ ಗುಲಬರ್ಗ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಕೆಲಕಾಲ ಅಥಿತಿ ಪ್ರಾಧ್ಯಾಪಕಿಯಾಗಿ ಮೈಸೂರು ವಿಶ್ವವಿದ್ಯಾನಿಲಯದ ,ಚಾಮರಾಜನಗರ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಬರವಣಿಗೆಗೆ ಹಲವಾರು ಪ್ರಶಸ್ತಿಗಳು ಗೆಲ್ಲುವುದಲ್ಲದೇ, ಇವರ ಕೃತಿಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಫೊಟೊಗ್ರಫಿಯಂದರೆ  ಇವರಿಗೆ ಖುಶಿ ಹಾಗು ಮೈಸೂರಿನ ರಂಗಾಯಣದಲ್ಲಿ ಹವ್ಯಾಸಿ ರಂಗಕಲಾವಿದೆಯಾಗಿ  ಹತ್ತು ವರ್ಷಗಳ ಒಡನಾಟ ಇದೆ. ಮೌಲ್ಯ 2015 ನಲ್ಲಿ ಟೊಟೊ ಕನ್ನಡ  ಸ್ರುಜನಶೀಲ ಸಾಹಿತ್ಯ ಪುರಸ್ಕಾರದ ವಿಜೇತರಗಿದ್ದರು.   
ರಾಜೇಂದ್ರ ಪ್ರಸಾದ್ ಮಂಡ್ಯದಲ್ಲಿ ಸ್ವಂತ ಉದ್ಯಮವೊಂದನ್ನು ನಡೆಸುತ್ತಾರೆ. ಇವರ ಆಸಕ್ತಿಗಳು ಹಲವು: ಸಾಹಿತ್ಯದ ಓದು-ಬರಹ (ವಿಶೇಷವಾಗಿ ಕಾವ್ಯ)ಕರ್ನಾಟಕ ಸಂಗೀತಇತಿಹಾಸಬೌದ್ಧಮತ ಅಧ್ಯಯನಝೆನ್ ಪೇಟಿಂಗ್ತತ್ವ ಮತ್ತು ಪಾಕ ಶಾಸ್ತ್ರ. 2006 ರ ರಿಂದ ಇವರ ಕವಿತೆ ಸಂಗ್ರಹಗಳು ಪ್ರಕಟವಾಗಿ, ಹಲವಾರು ಪ್ರಶಸ್ತಿಗಳು ಪಡೆದಿವೆ.  ಪ್ರಸ್ತುತವಾಗಿ 'ಸಂಕಥನಸಾಹಿತ್ಯ ಪತ್ರಿಕೆಯ ಸಂಪಾದಕರಾಗಿದ್ದಾರೆ. ರಾಜೇಂದ್ರ ಅವರು 2016 ಸಾಲಿನ ಟೊಟೊ ಕನ್ನಡ  ಸ್ರುಜನಶೀಲ ಸಾಹಿತ್ಯ ಪುರಸ್ಕಾರದ ವಿಜೇತರಗಿದ್ದರು.   
ಹೇಮಾ ನಾಯಕ್ ಉತ್ತರ ಕನ್ನಡದ ಅಂಕೋಲಾದ ನಿವಾಸಿಯಾಗಿದ್ದು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದಲ್ಲಿ ಎಂ. ಎಸ್ಸಿ. ಪದವಿ ಪಡೆದಿದ್ದಾರೆ. 2018 ಸಾಲಿನ ಟೊಟೊ ಕನ್ನಡ  ಸ್ರುಜನಶೀಲ ಸಾಹಿತ್ಯ ಪುರಸ್ಕಾರದ ಕಿರುಪಟ್ಟಿಯಲ್ಲಿದ್ದ ಮೂರು ಬರಹಗಾರರಲ್ಲಿ ಹೇಮಾ ಒಬ್ಬರಾಗಿದ್ದರು. ಕಳೆದ ಜನವರಿಯಲ್ಲಿ ನಡೆದ ಟೊಟೊ ಪುರಸ್ಕಾರ ಸಮಾರಂಭದಲ್ಲಿ ಇವರು ತಮ್ಮ ಕವಿತೆಯನ್ನು ಮೊದಲನೆ ಬಾರಿ ಬಹಿರಂಗವಾಗಿ ಓದಿ ಪ್ರಸ್ತುತಪಡೆಸಿದ್ದು, ಈ ಕಾವ್ಯ ಸಂಜೆ ಎರಡನೆ ಸಂಧರ್ಭವಾಗಿರುತ್ತದೆ,.
ನಿರ್ವಾಹಕರು:
ಡಾ.ಕಾವ್ಯಶ್ರೀ ಎಚ್ ಅವರು ವೃತ್ತಿಯಿಂದ  ಕನ್ನಡ ಉಪನ್ಯಾಸಕಿ. ಇವರು ಮಹಿಳಾ ಸಾಹಿತ್ಯಸ್ತ್ರೀವಾದಿ ವಿಮರ್ಶೆಅನುವಾದ ಮತ್ತು ಕಾವ್ಯಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಇಟ್ಟುಕೊಂಡಿದ್ದಾರೆ. 'ಕನ್ನಡದ ನಾಟಕಕಾರ್ತಿಯರು : ಸಾಹಿತ್ಯಕ ಮತ್ತು ಸಾಂಸ್ಕೃತಿಕ ಶೋಧಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ. ಕರ್ನಾಟಕ ಲೇಖಕಿಯರ ಸಂಘವು ಉದಯೋನ್ಮುಖ ಕವಯತ್ರಿಯರಿಗೆ ನೀಡುವ 'ಗುಡಿಬಂಡೆ ಪೂರ್ಣಿಮ ದತ್ತಿನಿಧಿ ಬಹುಮಾನಪಡೆದಿರುತ್ತಾರೆ. ಕಾವ್ಯ ಮತ್ತು ನಾಟಕ ರಚನೆಯಲ್ಲಿ ಆಸಕ್ತರಾಗಿದ್ದು ಮಕ್ಕಳ ನಾಟಕಗಳನ್ನು ರಚಿಸಿ ಸ್ವತಃ ನಿರ್ದೇಶಿಸಿದ್ದಾರೆ. 

Friday, June 15, 2018

ಟೊಟೊ ಪುರಸ್ಕಾರ 2019 ಕನ್ನಡ ಸೃಜನಶೀಲ ಸಾಹಿತ್ಯ : ಪ್ರವೇಶಗಳನ್ನು ಸಲ್ಲಿಸಲು ಆಹ್ವಾನಟೊಟೊ ಪುರಸ್ಕಾರ 2019
ಕನ್ನಡ ಸೃಜನಶೀಲ ಸಾಹಿತ್ಯ
ಪ್ರವೇಶಗಳನ್ನು ಸಲ್ಲಿಸಲು ಆಹ್ವಾನ


ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೊಟೊ ಪುರಸ್ಕಾರವು ಹದಿನೈದು ವರ್ಷಗಳಿಂದ ಯುವ ಪ್ರತಿಭೆಗಳಿಗೆ ಪ್ರೊತ್ಸಾಹ ನೀಡುತ್ತಾ ಬಂದಿದೆ. ಕಳೆದ ಎಂಟು ವರ್ಷಗಳಿಂದ ಕನ್ನಡಕ್ಕೂ ವಿಸ್ತೃತಗೊಂಡಿದ್ದು, ಒಂಬತ್ತನೆ ವರ್ಷಕ್ಕೆ ಕಾಲಿಡಲಿದೆ.

ಈ ಪ್ರಶಸ್ತಿಯನ್ನು ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts - TFA) ಸಂಸ್ಥೆಯು ಸ್ಥಾಪಿಸಿ ನಿರ್ವಹಿಸುತ್ತಿದೆ.

ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2019 ನೇ ಸಾಲಿನ ಟೊಟೊ ಪುರಸ್ಕಾರಕ್ಕಾಗಿ ಟೊಟೊ ಫಂಡ್ಸ್ ದಿ ಆರ್ಟ್ಸ್ ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸುತ್ತಿದೆ.

ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು ಭಾರತೀಯ ನಾಗರಿಕರಾಗಿರಬೇಕು (ಓವರ್ಸಿಸ್ ಸಿಟಿಜೆನ್ ಆಫ್ ಇಂಡಿಯಾ ಚೀಟಿ ಉಳ್ಳವರು ಪ್ರವೇಶಕ್ಕೆ ಅರ್ಹರಾಗಿರುವುದಿಲ್ಲ). ಹಾಗೂ 18 ರಿಂದ 29 ವರ್ಷ ವಯಸ್ಸಿನವರಾಗಿರಬೇಕು. ಅಂದರೆ, ನೀವು ಜನವರಿ 1, 1989 ರ ನಂತರ ಹುಟ್ಟಿದವರಾಗಿದ್ದಲ್ಲಿ ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಲು ಅರ್ಹರು. 

ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದಲ್ಲಿಯಾದರೂ ಪ್ರವೇಶಗಳನ್ನು ಕಳಿಸಬಹುದು. ಈ ಮೂರು ಪ್ರಕಾರಗಳಿಂದ ಒಬ್ಬರನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯನ್ನು ಕನ್ನಡದ ಹಿರಿಯ ಬರಹಗಾರರ ಸಮಿತಿಯು ಪ್ರತಿ ವರ್ಷದಂತೆ ಮಾಡಲಿದೆ. ಟೊಟೊ ಪುರಸ್ಕಾರದ ಹದಿನೈದನೆ ವರ್ಷಾಚರಣೆಯ ಸಂದರ್ಭದಲ್ಲಿ ಪುರಸ್ಕೃತರು ಪಡೆಯುವ ನಗದು ಬಹುಮಾನವನ್ನು 50,000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ನಮೂದಿಸಲಾದ ವಯೋಮಿತಿ ಒಳಗಿದ್ದವರು, ತಮಗೆ ಪುರಸ್ಕಾರ ಬಾರದಿದ್ದ ಪಕ್ಷದಲ್ಲಿ ಯೆಷ್ಟುಬಾರಿಯಾದರು ಪ್ರವೇಶಗಳನ್ನು ಕಳುಹಿಸಬಹುದು. ಪ್ರತಿ ಬಾರಿ ಪ್ರವೇಶಗಳನ್ನು ಕಳುಹಿಸಿದಾಗಲೂ ಕೃತಿಗಳು ಈ ಹಿಂದೆ ಕಳುಹಿಸಿದವು ಆಗಿರಬಾರದು. ಪ್ರತಿ ಬಾರಿಯೂ ಪ್ರವೇಶಕ್ಕೆ ಹೊಸ ಕೃತಿಗಳನ್ನು ಕಳುಹಿಸತಕ್ಕದ್ದು.

ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನಾಂಕ: 20 ಆಗಸ್ಟ್, 2018
ಪ್ರವೇಶಗಳನ್ನು ಈ ವಿಳಾಸಕ್ಕೆ ಕಳಿಸಿ:

Toto Funds the Arts (TFA)
H 301, Adarsh Gardens, 8th Block, 47th Cross,
Jayanagar, Bangalore 560 082
Phone: 080 26990549

ನೆನಪಿರಲಿ:
· ನೀವು 1ನೇ ಜನವರಿ 1989 ರ ನಂತರ ಹುಟ್ಟಿದವರಾಗಿದ್ದಲ್ಲಿ ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಲು ಅರ್ಹರಾಗಿರುತ್ತೀರಿ.

· ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನಾಂಕ: 20 ಆಗಸ್ಟ್, 2018. ಈ ಕೊನೆಯ ದಿನಾಂಕದ ನಂತರ ಬಂದ ಪ್ರವೇಶಗಳನ್ನು ಪರಿಗಣಿಸುವುದಿಲ್ಲ.

· ಭಾರತದಲ್ಲಿ ವಾಸಿಸುವ ಭಾರತೀಯ ನಾಗರಿಕರು ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗನ್ನು ಕಳಿಸಬಹುದು.

· ಕವಿತೆಗಳನ್ನು ಕಳುಹಿಸುವವರು 6 ರಿಂದ 10 ಕವಿತೆಗಳನ್ನು ಕಳಿಸಬಹುದು. ಕತೆಗಳನ್ನು ಕಳಿಸುವವರು ಒಂದಕ್ಕಿಂತ ಹೆಚ್ಚು ಕತೆಗಳನ್ನು ಕಳಿಸಬಹುದು, ಆದರೆ ಎಲ್ಲ ಕತೆಗಳೂ ಸೇರಿ 7500 ಶಬ್ದಗಳನ್ನು ಮೀರಬಾರದು.

· ನೀವು ಮೂರು ಪ್ರಕಾರಗಳಲ್ಲಿಯೂ ಪ್ರವೇಶಗಳನ್ನು ಕಳಿಸಬಹುದು. ಆದರೆ ಪ್ರತಿಯೊಂದು ಪ್ರಕಾರಕ್ಕೂ ಪ್ರತ್ಯೇಕವಾದ ಪ್ರವೇಶಗಳನ್ನು ಕಳಿಸಬೇಕು. ಉದಾಹರಣೆಗೆ ನೀವು ಮೂರೂ ಪ್ರಕಾರಗಳಿಗೆ ಪ್ರವೇಶಗಳನ್ನು ಕಳಿಸಬಯಸಿದರೆ, ನಿಮ್ಮ ಕವಿತೆಗಳನ್ನು ಮೊದಲ ಪ್ರವೇಶವಾಗಿಯೂ, ಕತೆಗಳನ್ನು ಎರಡನೆಯ ಪ್ರವೇಶವಾಗಿಯೂ, ನಾಟಕವನ್ನು ಮೂರನೆಯ ಪ್ರವೇಶವಾಗಿಯೂ ಕಳಿಸಬೇಕು. ಪ್ರತಿಯೊಂದು ಪ್ರವೇಶದ ಮಿತಿ 7500 ಶಬ್ದಗಳು.

· ಈಗಾಗಲೇ ಪುಸ್ತಕರೂಪದಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಪುರಸ್ಕಾರಕ್ಕಾಗಿ ಕಳಿಸುವಂತಿಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬಿಡಿ ಕತೆ, ಕವಿತೆ, ನಾಟಕಗಳನ್ನು ಕಳಿಸಬಹುದು.

· ಪ್ರವೇಶಕ್ಕಾಗಿ ಕಳಿಸುವ ಕತೆ, ಕವಿತೆ, ನಾಟಕಗಳ ಮೇಲೆ ಎಲ್ಲಿಯೂ ನಿಮ್ಮ ಹೆಸರು ಬರೆದಿರಬಾರದು. ಇದನ್ನು ಪ್ರತ್ಯೇಕವಾಗಿ ಅರ್ಜಿಯೆಲ್ಲೇ ಬರೆದು, ಪ್ರವೇಶದ ಜೊತೆ ಲಗತ್ತಿಸಬೇಕು.

· ಅರ್ಜಿಯನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ದಾಖಾಲಾದ ಹೆಸರು ಹಾಗು ಸಹಿ ಇಲ್ಲದೆ ಸ್ವೀಕರಿಸುವುದಿಲ್ಲ. ಕಾವ್ಯನಾಮ ಇದ್ದಲ್ಲಿ, ನಿಮ್ಮ ಅಸಲಿ ಹೆಸರನ್ನು ಕೂಡ ಸೂಚಿಸಬೇಕು.

· ನೀವು ಸಲ್ಲಿಸುವ ಪ್ರತಿ ಪ್ರವೇಶದ ಜೊತೆಗೆ ಅರ್ಜಿಯನ್ನು ಖಚಿತವಾಗಿ ಲಗತ್ತಿಸಬೇಕು. ಅರ್ಜಿಗಾಗಿ ಇಲ್ಲಿ ನೋಡಿ: https://docs.google.com/document/d/1xcATyN7vwgHaBvwqCcCCXC2TOyZMiS0f4ugQLs7CkE8/edit?usp=sharing
ಅಥವ tfa.kannada@gmail.com ಗೆ ಬರೆದು ಅರ್ಜಿಯ ವಿ-ಪ್ರತಿ (ಸಾಫ್ಟ್ ಕಾಪಿ) ಪಡೆಯಬಹುದು. ಈ ಅರ್ಜಿ ಇಲ್ಲದ ಪ್ರವೇಶಗಳನ್ನು ಪರಿಗಣಿಸುವುದಿಲ್ಲ.

· ನಿಮ್ಮ ಪ್ರವೇಶಗಳನ್ನು ಸಾದಾ ಅಂಚೆಯ ಮೂಲಕ ಅಥವಾ ಕುರಿಯರ್ ಮೂಲಕ ಈ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಕಳಿಸಿ. ರಿಜಿಸ್ಟರ್ಡ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳಿಸಬೇಡಿ.

· ಅಂಚೆ/ಕುರಿಯರ್ ಹೊದಿಕೆ (ಎನ್ವೊಲೊಪ್) ಮೇಲೆ ನಿಮ್ಮ ಕೃತಿಯ ಪ್ರಕಾರವನ್ನು ಸೂಚಿಸಬೇಕು. ಉದಾಹರಣೆಗೆ: ‘ಕನ್ನಡ ಸೃಜನಶೀಲ ಸಾಹಿತ್ಯ – ಕವಿತೆ’, ‘ಕನ್ನಡ ಸೃಜನಶೀಲ ಸಾಹಿತ್ಯ – ನಾಟಕ’ ಅಥವ ‘ಕನ್ನಡ ಸೃಜನಶೀಲ ಸಾಹಿತ್ಯ – ಕತೆ’.

· ಪ್ರವೇಶವನ್ನು ಅಂಚೆ/ಕುರಿಯರ್ ಮೂಲಕ ಕಳಿಸುವ ಜೊತೆಗೆ, ವಿ-ಪ್ರತಿ (ಸಾಫ್ಟ್ ಕಾಪಿ) ಕೂಡ tfa.kannada@gmail.com ಇದಕ್ಕೆ ಖಚಿತವಾಗಿ ಕಳಿಸಬೇಕು.

· ಹಸ್ತಪ್ರತಿಗಳನ್ನು ಹಾಳೆಯ ಒಂದೇ ಮಗ್ಗಲಿಗೆ ಕಂಪ್ಯೂಟರ್ ಬಳಸಿ ಅಥವ ಟೈಪ್ ಮಾಡಿ ಕಳಿಸಬೇಕು. ಪುಸ್ತಕಗಳು ಅಥವ ವಾರ್ತಪತ್ರಿಕೆಗಳ ಪತ್ರಿಕಾಭಾಗ ಕಳಿಸಿದ್ದಲ್ಲಿ ಅರ್ಜಿಯನ್ನು ಪರಿಗಣಿಸುವುದಿಲ್ಲ.

· ಪುರಸ್ಕಾರದ ಕುರಿತು ಯಾವುದೇ ಫೋನ್ ಕರೆಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಮಗೆ ಯಾವುದೇ ಬಗೆಯ ಸ್ಪಷ್ಟೀಕರಣ ಬೇಕಾದಲ್ಲಿ ಈ ಕೆಳಗಿನ ವಿಳಾಸಕ್ಕೆ ವಿ-ಅಂಚೆ ಕಳಿಸಿ: tfa.kannada@gmail.com ಅಥವ 98442 64157 ಗೆ ಕರೆ ಮಾಡಬಹುದು.


ಷರತ್ತುಗಳು:

ನೀವು ಸಲ್ಲಿಸಿದ ಬರಹಗಳನ್ನು ಹಿಂತಿರುಗಿಸಲಾಗುವುದಿಲ್ಲ. ಅಗತ್ಯವಾದಲ್ಲಿ ನೀವು ಸಲ್ಲಿಸಿದ ಬರಹಳ ಆಯ್ದ ಭಾಗಗಳನ್ನು ಅಂತರ್ಜಾಲ ತಾಣದಲ್ಲಿ ಅಥವ ಸಂಸ್ಥೆಯ ಬ್ಲಾಗ್’ನಲ್ಲಿ ಪುರಸ್ಕಾರದ ಪ್ರಚಾಕ್ಕೆ ಬಳಸಿಕೊಳ್ಳುವ ಹಕ್ಕು ಟಿ.ಎಫ್.ಎ.ಗೆ ಇದೆ. ಉಳಿದಂತೆ ಕೃತಿಯ ಪೂರ್ತಿ ಹಕ್ಕುಸ್ವಾಮ್ಯವು ಬರಹಗಾರರದೇ ಆಗಿರುತ್ತದೆ. ಈ ಬಗ್ಗೆ ಯಾವುದೇ ಪತ್ರ ವ್ಯವಹಾರ ಮಾಡಲಾಗುವುದಿಲ್ಲ. ಪುರಸ್ಕಾರದ ಕುರಿತು ಟಿ.ಎಫ್.ಎ ಆಯ್ಕೆಸಮಿತಿಯ ನಿರ್ಧಾರವೇ ಅಂತಿಮವಾದುದು ಮತ್ತು ಇದನ್ನು ಯಾವ ಬಗೆಯಲ್ಲೂ ಪ್ರಶ್ನಿಸಲಾಗದು.

ಈ ಪುರಸ್ಕಾರಕ್ಕೆ ಭೂಮಿಜಾ ಟ್ರಸ್ಟ್ ನೆರವು ನೀಡುತ್ತಿದೆ.

ಟಿ.ಎಫ್.ಎ. ಸಂಸ್ಥೆಯು ಆಂಗಿರಸ ‘ಟೊಟೊ’ ವೆಲ್ಲಾನಿಯ ಸ್ಮರಣಾರ್ಥ 2004 ರಲ್ಲಿ ಸ್ಥಾಪಿತವಾಯಿತು. ಕಲೆಗಳ ಬಗ್ಗೆ ಗಾಢವಾದ ಆಸಕ್ತಿಯನ್ನಿರಿಸಿಕೊಂಡಿದ್ದ ಟೊಟೊರವರ ಅಕಾಲಿಕ ಮರಣವು ಅವರ ಕುಟುಂಬ ಮತ್ತು ಸ್ನೇಹಿತರನ್ನು ಈ ಸಂಸ್ಥೆಯ ಸ್ಥಾಪನೆಗಪ್ರೇರೇಪಿಸಿತು. ಈ ಮೂಲಕ ಯುವ ಪ್ರತಿಭೆಗಳು ತಮ್ಮ ಕಲಾತ್ಮಕ ಅಭಿವ್ಯಕ್ತಿಯನ್ನು ಕಂಡುಕೊಳ್ಳುವಲ್ಲಿ ಉತ್ತೇಜನ ಸಿಗಲೆಂಬುದು ಇದರ ಆಶಯವಾಗಿದೆ.

TOTO Awards for English Creative Writing 2019: Call for ApplicationsTOTO AWARDS 2019
CREATIVE WRITING IN ENGLISH

CALL FOR APPLICATIONS

Toto Funds the Arts (TFA) invites applications from persons between the ages of 18 and 29 for the 2019 TOTO Awards for Creative Writing in English in three genres: short plays, short stories and poetry.

To mark the fifteenth year of the TOTO Awards, the cash prize for the each of the two winners has been increased to Rs 50,000. The winners will be decided by an independent panel of jurors. Entries should reach TFA by 20 August 2018 at the latest.

These awards are meant only for Indian nationals resident in India. (Overseas Citizen of India card-holders are not eligible.) And since the spirit of the awards is to identify promising young writers, you are eligible to apply if you were born on or after 1 January 1989. No exceptions will be made.

The hard copy and soft copy of each entry MUST be accompanied by an Application Form, which you can access here: 
https://docs.google.com/document/d/1f8p426CPSlLZBJWKjkTITtjrVG3IhfSouWP9vfxwPDE/edit?usp=sharing  
You can also request a copy of the Application Form by writing to sarita.tfaawards@gmail.com No entry will be accepted without this form, with all particulars filled in along with your name and signature as it appears in your bank account.

Each entry should be not more than 7,500 words.

If you are submitting poems, please send us between 6 and 10 poems.

If you are submitting short stories, their combined word length should be at least 2,500 words. You can, if you wish, send only a single story of 2,500 to 7,500 words.

Similarly for plays, you may submit one or more plays, but the word length of your entry should not exceed 7,500 words.

You can send entries in all three categories — poems, short stories and plays — but you must send in a separate entry for each category. For example, your poems can constitute one entry, your short stories the second entry, and plays a third.

Please state the category for which you are applying on the envelope, e.g., Writing-English (poetry) or Writing-English (short fiction), or Writing-English (plays).

Also ensure that no page of your entry, with the exception of the Application Form and the envelope containing your entry, carries your name on it.

Unless you have won this TOTO award earlier, you are eligible to apply again, but please submit new work for consideration

Entries should be sent by email (MS word document only) to sarita.tfaawards@gmail.com. The hard copy should be sent by courier or ordinary post (and NOT by speed post or registered post) to the address below (the phone numbers supplied are for courier purposes only):  

Toto Funds the Arts (TFA)
H 301 Adarsh Gardens
47th Cross, 8th Block
Jayanagar
Bangalore 560 082
Phone 080 26990549 / 09880623357

If you have any further queries please email sarita.tfaawards@gmail.com

The Fine Print: Submitted material will not be returned. The decision of the TFA jury will be final and cannot be contested in any forum. We reserve the right to use your submitted writings (if necessary) to publicise the awards either on our blog, website or in any in-house materials such as a newsletter. Otherwise, the copyright rests with the writer and your submission will be put to no other use without your express permission. 

These awards are being supported by The Jamun, a residential space for writers, artists and scholars; and Salmin Sheriff, playwright, actor and director.

Toto Funds the Arts is a not-for-profit public trust set up in memory of Angirus ‘Toto’ Vellani, who was intensely passionate about music, literature and films.