Sunday, July 10, 2022

Kannada Creative Writing Toto Award 2023: Call for Applications

ಟೋಟೋ ಪುರಸ್ಕಾರ 2023


ಕನ್ನಡ ಸೃಜನಶೀಲ ಸಾಹಿತ್ಯ ಬರಹಗಳಿಗೆ ಆಹ್ವಾನ


NOTE: The last date to submit applications has shifted to 30 September 2022.


ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಸ್ಥಾಪಿತವಾದ ಟೋಟೋ ಪುರಸ್ಕಾರವು

ಹದಿನೆಂಟು ವರ್ಷಗಳಿಂದ ಯುವ ಪ್ರತಿಭೆಗಳಿಗೆ ಪ್ರೊತ್ಸಾಹ ನೀಡುತ್ತಾ ಬಂದಿದೆ. ಇದು ಹನ್ನೆರಡು ವರ್ಷಗಳಿಂದ

ಕನ್ನಡಕ್ಕೂ ವಿಸ್ತೃತಗೊಂಡು, ಈಗ ಹದಿಮೂರನೆಯ ವರ್ಷಕ್ಕೆ ಕಾಲಿಡುತ್ತಿದೆ. ಈ ಪ್ರಶಸ್ತಿಯನ್ನು ಟೋಟೋ ಫಂಡ್ಸ್ ದಿ ಆರ್ಟ್ಸ್ (Toto Funds the Arts – TFA) ಸಂಸ್ಥೆಯು  ಸ್ಥಾಪಿಸಿ ನಿರ್ವಹಿಸುತ್ತಿದೆ.


ಕನ್ನಡದ ಸೃಜನಶೀಲ ಯುವ ಬರಹಗಾರರಿಗೆ ಮೀಸಲಾದ 2023ನೆ ಸಾಲಿನ ಟೋಟೋ ಪುರಸ್ಕಾರಕ್ಕಾಗಿ,

ಟೋಟೋ ಫಂಡ್ಸ್ ದಿ ಆರ್ಟ್ಸ್ ಸಂಸ್ಥೆಯು ಸಲ್ಲಿಕೆಗಳನ್ನು ಆಹ್ವಾನಿಸುತ್ತಿದೆ.


ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು ಭಾರತೀಯ ಪ್ರಜೆಗಳಾಗಿರಬೇಕು

(ಓವರ್ಸೀಸ್ ಸಿಟಿಜೆನ್ ಆಫ್ ಇಂಡಿಯಾ, ಎಂದರೆ OCI ಚೀಟಿ ಉಳ್ಳವರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ)

ಹಾಗೂ 18ರಿಂದ 29 ವರ್ಷ ವಯಸ್ಸಿನವರಾಗಿರಬೇಕು. ಅಂದರೆ, ನೀವು ಜನವರಿ 1, 1993ರ ಮತ್ತು ಜನವರಿ

1, 2005 ನಡುವೆ ಹುಟ್ಟಿದ್ದರೆ ಮಾತ್ರ ಈ ಪುರಸ್ಕಾರಕ್ಕೆ ಸಲ್ಲಿಕೆಗಳನ್ನು ಕಳಿಸಬಹುದು.


ಸಲ್ಲಿಕೆಗಳನ್ನು ಕಥೆ, ಕವಿತೆ ಮತ್ತು ನಾಟಕ – ಈ ಮೂರರಲ್ಲಿ ಯಾವುದೇ ಪ್ರಕಾರದಲ್ಲಿಯಾದರೂ ಕಳಿಸಬಹುದು.

ಈ ಮೂರು ಪ್ರಕಾರಗಳಿಂದ ಒಬ್ಬರನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ.

 

ಈ ಆಯ್ಕೆಯನ್ನು ಪ್ರತಿ ವರ್ಷದಂತೆ ಕನ್ನಡದ ಹಿರಿಯ ಬರಹಗಾರರ ಸಮಿತಿಯು ಮಾಡಲಿದೆ.


ಟೋಟೋ ಪುರಸ್ಕಾರವು 50,000 ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿದೆ.


ಸಲ್ಲಿಕೆಗಳನ್ನು ಕಳುಹಿಸಲು ಕೊನೆಯ ದಿನಾಂಕ:  15 ಸಪ್ಟೆಂಬರ್,  2023


ಸಲ್ಲಿಕೆಗಳನ್ನು ಈ ಈಮೇಲ್ ವಿಳಾಸಕ್ಕೆ ಕಳಿಸಬೇಕು: totokannada@gmail.com. ಸಂದೇಹಗಳಿದ್ದಲ್ಲಿ ಇದೇ ವಿಳಾಸಕ್ಕೆ ಬರೆದು ಹೆಚ್ಚಿನ ವಿವರಕ್ಕಾಗಿ ಕೇಳಬಹುದು.


ನಿಮ್ಮ ಪ್ರತಿ ಸಲ್ಲಿಕೆಯ ಜೊತೆಗೆ ಅರ್ಜಿಯನ್ನು ಲಗತ್ತಿಸಬೇಕು. ಈ ಅರ್ಜಿಯನ್ನು

http://totofundsthearts.blogspot.com ಕೊಂಡಿಯಿಂದ ನಕಲಿಸಬಹುದು. ಅರ್ಜಿ ಇಲ್ಲದ ಸಲ್ಲಿಕೆಗಳನ್ನು ಪರಿಗಣಿಸುವುದಿಲ್ಲ. 


ನಿಯಮಗಳು:


ನೀವು 1ನೆ ಜನವರಿ 1993ರ ಮತ್ತು 1ನೆ ಜನವರಿ 2005 ನಡುವೆ ಹುಟ್ಟಿದ್ದರೆ ಮಾತ್ರ ಈ ಪುರಸ್ಕಾರಕ್ಕೆ ಸಲ್ಲಿಕೆಗಳನ್ನು

ಕಳಿಸಬಹುದು.


ಸಲ್ಲಿಕೆಗಳನ್ನು ಕಳುಹಿಸಲು ಕೊನೆಯ ದಿನಾಂಕ: 15 ಸಪ್ಟೆಂಬರ್,  2023. ಈ ದಿನಾಂಕದ ನಂತರ  ಬಂದ ಸಲ್ಲಿಕೆಗಳನ್ನು ಪರಿಗಣಿಸುವುದಿಲ್ಲ.


ಸಲ್ಲಿಕೆಗಳನ್ನು MS Wordನಲ್ಲಿ ನುಡಿ, ಬರಹ ಅಥವಾ ಯೂನಿಕೋಡ್ –

ಈ ಮೂರು ಸಾಫ್ಟ್ವೇರಿನಲ್ಲಿ ಮಾತ್ರ ಟೈಪಿಸಿ ಕಳಿಸಬೇಕು. ಮುದ್ರಿತಪ್ರತಿಗಳನ್ನು

ಅಥವಾ ಹಸ್ತಪ್ರತಿಗಳನ್ನು ಸ್ವೀಕರಿಸುವುದಿಲ್ಲ. MS Word ಅಲ್ಲದೇ ಬೇರೆ ಯಾವ ಸಾಫ್ಟವೇರ್

ನಲ್ಲಿಯೂ ಸಲ್ಲಿಕೆಗಳನ್ನು ಸ್ವೀಕರಿಸುವಿದಿಲ್ಲ.


ಸಲ್ಲಿಕೆಗಳನ್ನು ಈ ಈಮೇಲ್ ವಿಳಾಸಕ್ಕೆ ಕಳಿಸಬೇಕು: totokannada@gmail.com


ನೀವು ಸಲ್ಲಿಸುವ ಪ್ರತಿ ಸಲ್ಲಿಕೆಯ ಜೊತೆಗೆ ನಿಮ್ಮ ವೈಯಕ್ತಿಕ ವಿವರಗಳುಳ್ಳ ಅರ್ಜಿಯನ್ನು ಲಗತ್ತಿಸಬೇಕು.

ಈ ಅರ್ಜಿಯನ್ನು http://totofundsthearts.blogspot.in/ ಕೊಂಡಿಯಿಂದ ನಕಲಿಸಬಹುದು. ಈ ಅರ್ಜಿ ಇಲ್ಲದ ಸಲ್ಲಿಕೆಗಳನ್ನು ಪರಿಗಣಿಸುವಿದಿಲ್ಲ.


ಅರ್ಜಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ದಾಖಲಾದ ಹೆಸರನ್ನು ನಮೂದಿಸಬೇಕು. ಕಾವ್ಯನಾಮ ಇದ್ದಲ್ಲಿ, ನಿಮ್ಮ

ಅಸಲಿ ಹೆಸರನ್ನು ಕೂಡ ಅರ್ಜಿಯಲ್ಲಿ ಸೂಚಿಸಬೇಕು.


ಸಲ್ಲಿಸುವ ಕಥೆ, ಕವಿತೆ, ನಾಟಕಗಳ ಮೇಲೆ ಎಲ್ಲಿಯೂ ನಿಮ್ಮ ಹೆಸರು ಬರೆದಿರಬಾರದು. ಇದನ್ನು

ಅರ್ಜಿಯಲ್ಲೇ ಬರೆದು, ಸಲ್ಲಿಕೆಯ ಜೊತೆ ಕಳಿಸಬೇಕು.


ನಿಮಗೆ ಅರ್ಜಿಯನ್ನು ಪಡೆಯುವಲ್ಲಿ ಅಥವಾ ಇತರ ತೊಂದರೆಗಳಿದ್ದಲ್ಲಿ totokannada@gmail.comಗೆ ಬರೆದು ಸಹಾಯ ಕೇಳಬಹುದು.


ಭಾರತದಲ್ಲಿ ವಾಸಿಸುವ ಭಾರತೀಯ ಪ್ರಜೆಗಳು ಮಾತ್ರ ಈ ಪುರಸ್ಕಾರಕ್ಕೆ ಸಲ್ಲಿಕೆಗಳನ್ನು ಕಳಿಸಬಹುದು.

ಓವರ್ಸೀಸ್ ಸಿಟಿಜೆನ್ ಆಫ್ ಇಂಡಿಯಾ (OCI) ಚೀಟಿ ಉಳ್ಳವರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.


ಕವಿತೆಗಳನ್ನು ಕಳುಹಿಸುವವರು 8 ರಿಂದ 12 ಕವಿತೆಗಳನ್ನು ಕಳಿಸಬಹುದು. ಈ ಕವಿತೆಗಳ ಬಳಿಸಿದ ಒಟ್ಟು ಪದಗಳ ಮೊತ್ತ 7500 ಪದಗಳನ್ನು ಮೀರಬಾರದು. ಕಥೆಗಳನ್ನು ಕಳಿಸುವವರು ಒಂದಕ್ಕಿಂತ ಹೆಚ್ಚು ಕತೆಗಳನ್ನು ಕಳಿಸಬಹುದು. ಆದರೆ, ಎಲ್ಲ ಕಥೆಗಳು ಸೇರಿ 7500 ಪದಗಳನ್ನು ಮೀರಬಾರದು. ಹಾಗೆಯೇ, ಸಲ್ಲಿಸುವ ನಾಟಕಗಳ ಒಟ್ಟು ಪದಮಿತಿ 10,000 ಪದಗಳು.


ನೀವು ಎಲ್ಲ ಮೂರು ಪ್ರಕಾರಗಳಿಗೆ ಸಲ್ಲಿಕೆಗಳನ್ನು ಕಳಿಸಬಹುದು. ಆದರೆ, ಪ್ರತಿಯೊಂದು ಪ್ರಕಾರಕ್ಕೂ ಪ್ರತ್ಯೇಕವಾಗಿ

ಸಲ್ಲಿಕೆಗಳನ್ನು ಕಳಿಸಬೇಕೆಂದು ತಿಳಿದಿರಲಿ.


ಉದಾಹರಣೆಗೆ, ನೀವು ಮೂರೂ ಪ್ರಕಾರಗಳಿಗೂ ಸಲ್ಲಿಕೆಗಳನ್ನು ಕಳಿಸಬಯಸುತ್ತೀರಿ ಎಂದಿಟ್ಟುಕೊಳ್ಳಿ. ಆಗ, ನಿಮ್ಮ 

ಕವಿತೆಗಳನ್ನು ಮೊದಲ  ಸಲ್ಲಿಕೆಯಾಗಿಯೂ, ಕಥೆಗಳನ್ನು ಎರಡನೆ ಸಲ್ಲಿಕೆಯಾಗಿಯೂ ಹಾಗೂ ನಾಟಕಗಳನ್ನು

ಮೂರನೆಯ ಸಲ್ಲಿಕೆಯಾಗಿಯೂ ಕಳಿಸಬೇಕು. ಪ್ರತಿ ಸಲ್ಲಿಕೆಯ ಜೊತೆಗೆ ಪ್ರತ್ಯೇಕ ಅರ್ಜಿ ಲಗತ್ತಿಸಬೇಕು.


ಈಗಾಗಲೇ ಪುಸ್ತಕರೂಪದಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಸ್ಪರ್ಧೆಗಾಗಿ ಕಳಿಸುವಂತಿಲ್ಲ. ಆದರೆ, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬಿಡಿ ಕವಿತೆಗಳು, ಕಥೆಗಳು ಮತ್ತು

ನಾಟಕಗಳನ್ನು ಕಳಿಸಬಹುದು. ಈಗಾಗಲೇ ಹೇಳಿದಂತೆ ಎಲ್ಲವೂ ಈಮೇಲ್ ಮೂಲಕ ಮಾತ್ರ ಕಳಿಸಬೇಕು. 


ಈಮೇಲ್ Subjectನಲ್ಲಿ ನಿಮ್ಮ ಕೃತಿಯ ಪ್ರಕಾರವನ್ನು ಸೂಚಿಸಬೇಕು. ಉದಾಹರಣೆಗೆ: ‘ಕನ್ನಡ ಸೃಜನಶೀಲ

ಸಾಹಿತ್ಯ – ಕವಿತೆ’ ಅಥವಾ ‘ಕನ್ನಡ ಸೃಜನಶೀಲ ಸಾಹಿತ್ಯ – ನಾಟಕ’ ಅಥವಾ ‘ಕನ್ನಡ ಸೃಜನಶೀಲ ಸಾಹಿತ್ಯ – ಕಥೆ’.


ಷರತ್ತುಗಳು:


ನೀವು ಸಲ್ಲಿಸಿದ ಬರಹಗಳನ್ನು ಹಿಂತಿರುಗಿಸಲಾಗುವುದಿಲ್ಲ. ಅಗತ್ಯವಿದ್ದಲ್ಲಿ, ನೀವು ಸಲ್ಲಿಸಿದ ಬರಹಗಳ 

ಆಯ್ದ ಭಾಗಗಳನ್ನು ಅಂತರ್ಜಾಲ ತಾಣದಲ್ಲಿ ಅಥವಾಸಂಸ್ಥೆಯ ಬ್ಲಾಗ್-ನಲ್ಲಿ ಪುರಸ್ಕಾರದ ಪ್ರಚಾರದ ಸಲುವಾಗಿ ಬಳಸಿಕೊಳ್ಳುವ ಹಕ್ಕು ಟಿ. ಎಫ್. ಎ ಸಂಸ್ಥೆಗೆ

ಇರುತ್ತದೆ. ಉಳಿದಂತೆ, ಕೃತಿಯ ಎಲ್ಲ ಹಕ್ಕುಗಳು ಬರಹಗಾರರದೇ ಆಗಿರುತ್ತದೆ.


ಈ ಬಗ್ಗೆ ಯಾವುದೇ ಪತ್ರವ್ಯವಹಾರ ಮಾಡಲಾಗುವುದಿಲ್ಲ. ಪುರಸ್ಕಾರದ ಕುರಿತು ಟಿ.ಎಫ್.ಎ ಆಯ್ಕೆ 

ಸಮಿತಿಯ ನಿರ್ಧಾರವೇ ಅಂತಿಮವಾದುದು ಮತ್ತು ಯಾವ ಬಗೆಯಲ್ಲೂ ಪ್ರಸ್ನಿಸಲಾಗದು.


ಈ ಪುರಸ್ಕಾರಕ್ಕೆ ಭೂಮಿಜಾ ಟ್ರಸ್ಟ್ ನೆರವು ನೀಡುತ್ತಿದೆ. ಭೂಮಿಜಾ ಸಂಸ್ಥೆಯಿ ಪ್ರದರ್ಶನಕಲೆಗಳ

ಕಾರ್ಯಕ್ರಮಗಳನ್ನು ಬೆಂಗಳೂರು ಸೇರಿದಂತೆ ವಿಶ್ವಾದ್ಯಂತ ಹಮ್ಮಿಕೊಳ್ಳುತ್ತಿರುವ ಸಂಸ್ಥೆ.


ಟಿ. ಎಫ್. ಎ ಸಂಸ್ಥೆಯು ಆಂಗೀರಸ ‘ಟೋಟೋ’ ವೆಲ್ಲಾನಿಯ ಸ್ಮರಣಾರ್ಥವಾಗಿ 2004 ಇಸವಿಯಲ್ಲಿ

ಸ್ಥಾಪಿತವಾಯಿತು. ಕಲೆಗಳ ಬಗ್ಗೆ ಗಾಢವಾದ ಆಸಕ್ತಿಯನ್ನಿರಿಸಿಕೊಂಡಿದ್ದ ತರುಣ ಟೋಟೋ ಅಕಾಲಿಕ

ಮರಣವು ಅವರ ಕುಟುಂಬ ಮತ್ತು ಸ್ನೇಹಿತರನ್ನು ಈ ಸಂಸ್ಥೆಯನ್ನು ಸ್ಥಾಪಿಸಲು ಪ್ರೇರಣೆ ಕೊಟ್ಟಿತು.

ಟೋಟೋ ಪುರಸ್ಕಾರಗಳ ಮೂಲಕ ಯುವಯುವ ಪ್ರತಿಭೆಗಳಿಗೆ ತಮ್ಮ ಕಲಾತ್ಮಕ ಅಭಿಯಕ್ತಿಗೆ ಉತ್ತೇಜನ ದೊರಕಲಿ ಎಂದೇ ಸಂಸ್ಥೆಯ ಆಶಯವಾಗಿದೆ.


No comments: